Friday, June 6, 2008

ಮಳೆ ನಿಂತು ಹೋದ ಮೇಲೆ....

ಶುಭ್ರ ನೀಲಾಕಾಶದ ಮೇಲೆ ಕಡು ಕಪ್ಪಿನ ಕಾರ್ಮೋಡ
ಗಗನದ ವಾಂಚೆ, ಅಭೀಪ್ಸೆ ಸ್ವಾಗತಿಸುತ್ತದೆ ಆ ಮೋಡಗಳನ್ನ
ಒಡನಾಟ ಕ್ಷಣಕಾಲ ಸುಂದರವಾಗಿದ್ದರೂ
ಅದರ ಹಿಂದೆ ಕಪ್ಪಿಟ್ಟ ಕಲೆಗಳು

ಭೋರೆಂಬ ಮಳೆ

ಮಳೆ ನಿಂತ ಮೇಲೆ
ಮರೆಮಾಚಿತು ಮೋಡ
ಮತ್ತೆ ಮೌನ, ಅದೇ ಶುಭ್ರ ನೀಲಾಕಾಶ
ಮತ್ತೆ ಹೊಸ ಕಿರಣ

ಕಿಟಕಿ ತೆರೆದು ನೋಡಿದೆ ನಾನು
ಆಗಸ ಪ್ರಬುಧ್ಧವಾಗಿದೆಯೇ?
ಸಂತಸ ಪಟ್ತೆ

2 comments:

ತೇಜಸ್ವಿನಿ ಹೆಗಡೆ said...

ಜೀವನಕ್ಕೂ ಪ್ರಕೃತಿಗೂ ತುಂಬಾ ಸಾಮ್ಯತೆ ಇದೆ.. ಅದನ್ನೇ ಕವನದ ಮೂಲಕ ಕಾಣಿಸುವ ಯತ್ನ ಚೆನ್ನಾಗಿದೆ.

kanasu said...

ಧನ್ಯವಾದಗಳು ತೇಜಸ್ವಿನಿಯವರೇ..