Thursday, July 15, 2010

ತಂಗಿಗೊಂದು ಮಾತು...ಜನುಮ ದಿನದ ಶುಭಾಶಯಗಳು ನಿನಗೆ
ಹದಿನೆಂಟರ ಹರೆಯದ ಹೆಣ್ಣಾದೆಯೆಂಬ ಸಂತಸ ನಮಗೆ

ನಮ್ಮೆಲ್ಲರ ಮೆಚ್ಚಿನ ಕೂಸಾದ
ಸುಗುಣೆ, ಸಂಪ್ರೀತೆಯಾದ ನಿನಗೆ
ನನ್ನೀ ಹರಕೆ, ಆಶೀರ್ವಾದ
ಬಾಳು ನೂರ್ಕಾಲ ಸಂತಸದಿ ಹೀಗೆ

ನಿನ್ನ ಪುಟ್ಟ ಕಂಗಳಿಗೆ ಹಾಡಿದ್ದೆ
ನೆನಪಿದೆಯೇ ಜೋಗುಳ ಅಂದು
ಹದಿನೆಂಟು ವರುಷದಿಂದದೇ ಹರುಷ
ನೀತಂದೆ ಇಂದೂ

ಆನಂದ ಆಕ್ರಂದ, ಉಲ್ಲಾಸ ಉದಾಸ
ಎಲ್ಲಕೂ ಆದೆ ನೀ ಎಂದೂ ಜೊತೆಗಾತಿ
ನಿನಗಿದೋ ಈ ಹಿರಿಯಕ್ಕನ
ಸಲುಗೆ ಪ್ರೀತಿ ಗೆಳತಿ

ದಿಗಂತದೆಡೆಗೆ...


ಅದೆಂತಹ ಅಯಸ್ಕಾಂತೀಯ ಶಕ್ತಿ
ಒಲ್ಲೆನೆಂದರೂ, ಕಡೆಗೊಂದು ದಿನ ಸಿಕ್ಕಿ ಬಿದ್ದೆ
ಹಕ್ಕಿ ಹಾರಿ ಬಂದು ಕೂತಾಗ
ನೋಡದೇ ಕಡೆಗಣಿಸಿದ್ದೆ
ಬೇಡವಾಗಿತ್ತು ಅಂದು ಆ ನೋಟ

ಮತ್ತೀಗ, ಅರೆ! ಎಲ್ಲಿ?
ಅದೇ ಹಕ್ಕಿ, ಗರಿ ಬಿಚ್ಚಿ ಹಾರಿದೆ
ನಿಲುಕಿಗೂ ಸಿಗದಂತೆ
ಮತ್ತೆಂದೂ ತಿರುಗಿ ಬಾರದಂತೆ
ತಿರುಗಿನೋಡದಂತೆ
ದೂರ ತೀರ ದಿಗಂತದೆಡೆಗೆ
(BA ಓದುತ್ತಿದ್ದಾಗ ಬರೆದದ್ದು)