ಜೀವನದ ಪಯಣದ ಮಹತ್ತರ ಘಟ್ಟ
ಇತ್ತ ಕಾಡು ಅತ್ತ ಕತ್ತಲೆ ನಡುವೆ ಬಯಲ ಬೆತ್ತಲೆ!
ಕಡುಗಪ್ಪಿನ ಭಯಾನಕ… ಹಿತವಾದ ಮೌನ
ಹಚ್ಚಲೇ ಬೇಕಿನ್ನು ಸಪೂರದ ಸಣ್ಣ ಲಾಟೀನು
ಎನ್ನುವಷ್ಟರಲ್ಲಿ, ಅರೆ...ಈತನಾರು!
ನಿರ್ಭಾರ ನಿರಾತಂಕ ನದಿಯ ಅಲೆಗಳ ಮೀಟುತಾ?!
ಆತನ ದೀಪ ನನ್ನ ಸಣ್ಣ ಲಾಟೀನಿಗಿಂತ ಪ್ರಖರ!
ಮತ್ತವನ ಕನಸ ಕೊಂಡಿಗಳೂ ಸಹ!
ಸಾಕಷ್ಟು ದಿನ ಮರೆತಿದ್ದ ಹಾಡನ್ನು ಕನವರಿಸಿದ...
ಲಯ ತಾಳ ಜೀವ ಭಾವವೆಲ್ಲವೂ ಬೇರೆ
ಆದರೂ.. ಆ ಹಾಡು ಮನನಡುಗಿಸಿದರೂ.. ಸೆಳೆಯಿತು!
ನನ್ನದಲ್ಲದ ರಾಗ ನನಗಂದು ಹಿಡಿಸಿತ್ತು!!
ಮತ್ತೀಗ ದೀಪ ಲಾಟೀನೆರಡರ ಬೆಳಕು ವರ್ಣಮಯ..
ಆ ಬಣ್ಣ.. ಹಿತ ಅಹಿತಗಳ ಕಲಸುಮೇಲೋಗರ!
ಸಂಯೋಜಕ.....ಸಂಕೀರ್ಣ.....ಸುಂದರ!
ಹೀಗೆ ಇಬ್ಬದಿಯ ಮನದ ತುಮುಲಗಳ
ಕನಸುಗಳ ಅನುಭವಿಸಿ ಆಸ್ವಾದಿಸುವುದ ಕಲಿಸಿ
ನಗಿಸಿ ನಗುವುದೇ...ಈ ಜೀವನ!
6 comments:
ಹುಡುಗಿ, ನಿನ್ನ ಹುಡುಗ ನಿಜಕ್ಕೂ ನಿನ್ನ ಮೋಡಿ ಮಾಡಿದ್ದಾನೆ. ನೀನು ಇಷ್ಟು ಕನಸುಗಳುಳ್ಳ ರೋಮಾಂಟಿಕ್ ಹುಡುಗಿ ಅಂತ ಗೊತ್ತಿರಲಿಲ್ಲ. ನಿನ್ನ ಒಳಗಿನ ನಿನ್ನನ್ನು ಆಚೆ ತಂದ ಆತನಿಗೆ ಥ್ಯಾಂಕ್ಸ್ :)
ಕವನ ತುಂಬಾ ಚೆನ್ನಾಗಿದೆ
ಥ್ಯಾಂಕ್ ಯು.....ಆದರೆ ಈ ಪದ್ಯ ನೀ ತಿಳಿದಂತಲ್ಲ....ಬೇರೇನೆ ಹೇಳ್ತಿದೆ ಸೌಮ್.... :)
ಕವನ ಇಷ್ಟವಾಯ್ತು.
ಭಾಶೇ ಅವರಿಗೆ ಅನಿಸುವಂತೆಯೇ ನನಗೂ ಅನಿಸುತ್ತದೆ.
ಹಾಗಿಲ್ಲದಿದ್ದರೆ, ದಯವಿಟ್ಟು ವಿವರಿಸಿ!
ಹೀಗೆ ಇಬ್ಬದಿಯ ಮನದ ತುಮುಲಗಳ
ಕನಸುಗಳ ಅನುಭವಿಸಿ ಆಸ್ವಾದಿಸುವುದ ಕಲಿಸಿ
ನಗಿಸಿ ನಗುವುದೇ...ಈ ಜೀವನ!
ಆಶಾವಾದಿತ್ವದಿ೦ದ ಕೂಡಿದ ಸ೦ಕೀರ್ಣ, ಸು೦ದರ ಕವನ ನೀಡಿದ್ದಕ್ಕಾಗಿ ಅಭಿನ೦ದನೆಗಳು.
ಕವನ ಮೆಚ್ಚಿದ್ದಕ್ಕಾಗಿ ಥ್ಯಾಂಕ್ಸ್ ಸುನಾಥ್ ಕಾ ಕಾ :)
ಪ್ರಭಾಮಣಿ ಅವರೇ,
ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಮತ್ತು ಕವನ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು. :)
Post a Comment