ಅದೆಂತಹ ಅಯಸ್ಕಾಂತೀಯ ಶಕ್ತಿ
ಒಲ್ಲೆನೆಂದರೂ, ಕಡೆಗೊಂದು ದಿನ ಸಿಕ್ಕಿ ಬಿದ್ದೆ
ಹಕ್ಕಿ ಹಾರಿ ಬಂದು ಕೂತಾಗ
ನೋಡದೇ ಕಡೆಗಣಿಸಿದ್ದೆ
ಬೇಡವಾಗಿತ್ತು ಅಂದು ಆ ನೋಟ
ಮತ್ತೀಗ, ಅರೆ! ಎಲ್ಲಿ?
ಅದೇ ಹಕ್ಕಿ, ಗರಿ ಬಿಚ್ಚಿ ಹಾರಿದೆ
ನಿಲುಕಿಗೂ ಸಿಗದಂತೆ
ಮತ್ತೆಂದೂ ತಿರುಗಿ ಬಾರದಂತೆ
ತಿರುಗಿನೋಡದಂತೆ
ದೂರ ತೀರ ದಿಗಂತದೆಡೆಗೆ
(BA ಓದುತ್ತಿದ್ದಾಗ ಬರೆದದ್ದು)
2 comments:
ಒಳ್ಳೆಯ ಕವನ.
ಹಾರಿದ ಹಕ್ಕಿ,ಬಲೆಯಲಿ ಮತ್ತೆ ಸಿಕ್ಕದೆ ಇದ್ದೀತೆ?
Wait and see!
thanks kaka :)
Post a Comment