ಯಾಕೆ ಏನೇನೋ ಅನಿಸುತ್ತದೆ!
ಸರಿ ತಪ್ಪು ಏನೂ ತಿಳಿಯದು ಈ ಅನಿಸಿಕೆಗೆ
ಮನಸಿಗೆ ಈ ಹುಚ್ಚು ಆಲೋಚನೆಗಳನ್ನ
ತುಂಬಿದವರಾರು?
ನೀ ನನ್ನ ಹಾಗೆ
ನಾ ನಿನ್ನ ಹಾಗೆ
ನಾವಿಬ್ಬರೂ ನಾವಲ್ಲದ ಹಾಗೆ
ಆಗಸದಿ ಹಾರುವ ಚಿಟ್ಟೆಯಾದ ಹಾಗೆ
ನನ್ನ ಭಾವನೆಗೆ ನೀ ಉಸಿರಾದ ಹಾಗೆ
ನಿನ್ನ ಕಲ್ಪನೆಗೆ ನಾ ಮೂರ್ತವಾದ ಹಾಗೆ
ನಮ್ಮ ಕನಸಿನ ಹಣತೆ ಹಚ್ಚಿದ ಹಾಗೆ
ಕಲ್ಮಷವಿಲ್ಲದ ಪ್ರೇಮ ಜ್ಯೋತಿ ಬೆಳಗಿದ ಹಾಗೆ
ಹೌದು! ಇದು ಸ್ವಮುಗ್ಧ ಪ್ರಪಂಚ
ತಿಳಿದು ತಿಳಿದೂ ಕಟ್ಟಿದ ಕಲ್ಪನಾಲೋಕ
ಇದಕ್ಕೆ ಎಲ್ಲರೂ ಅರಸರು
ಮತ್ತಿದು ಪ್ರತಿ ವ್ಯಕ್ತಿಯ ವಯಕ್ತಿಕ ಆಸ್ತಿ
9 comments:
ಇದು ನನ್ನ ನಿನ್ನ ಬಗ್ಗೆ ಬರೆದ ಕವಿತೆನಾ?
ಚೆನ್ನಾಗಿದೆ! ಅಬ್ಬ! ಅಂತು ಇಂತೂ ನಿನ್ನ ಕವನ ಕಾಣಿಸ್ತಲ್ಲ! ಧನ್ಯಳಾದೆ! :)
It pulls us to imagine lot many things :)
nice write up ...
ನನ್ನ ನಿನ್ನ ಬಗ್ಗೆ ಆಗಿರಬೇಕಿತ್ತ?! :)
thanks sowm...
thanks manju!!! :)
ಹಾಯ್,
ನಿಮ್ಮ ಕವಿತೆ ಮುದ್ದಾಗಿದೆ.
ಸ್ಪೋರ್ತೀ ಯಾರೂ ಅಂತ ತೀಳಿಕೋಬಹುದಾ..?
ಹಲೋ ಕನಸು,
we share a common e-name :)
ಕಲ್ಪನೆಯೂ ಸ್ಪೂರ್ತಿಯಾಗಬಹುದು ಎಂದು ನನ್ನ ಸಾಲುಗಳು ಹೇಳುತ್ತಿವೆಯಲ್ಲವೇ? :)
ಮೆಚ್ಚಿದ್ದಕ್ಕೆ ಧನ್ಯವಾದಗಳು...
‘ಇದು ಸ್ವಮುಗ್ಧ ಪ್ರಪಂಚ!’ ತುಂಬ ಸುಂದರವಾದ ಪದರಚನೆ.
prati baari tappade odutteeri....mechchuge vyakta padisutteeri....thanks kaa kaa :)
ತುಂಬಾ ಸುಂದರ ಕವಿತೆ
ಪ್ರೇರಣೆ ಯಾರು?
Post a Comment