Thursday, July 15, 2010

ತಂಗಿಗೊಂದು ಮಾತು...ಜನುಮ ದಿನದ ಶುಭಾಶಯಗಳು ನಿನಗೆ
ಹದಿನೆಂಟರ ಹರೆಯದ ಹೆಣ್ಣಾದೆಯೆಂಬ ಸಂತಸ ನಮಗೆ

ನಮ್ಮೆಲ್ಲರ ಮೆಚ್ಚಿನ ಕೂಸಾದ
ಸುಗುಣೆ, ಸಂಪ್ರೀತೆಯಾದ ನಿನಗೆ
ನನ್ನೀ ಹರಕೆ, ಆಶೀರ್ವಾದ
ಬಾಳು ನೂರ್ಕಾಲ ಸಂತಸದಿ ಹೀಗೆ

ನಿನ್ನ ಪುಟ್ಟ ಕಂಗಳಿಗೆ ಹಾಡಿದ್ದೆ
ನೆನಪಿದೆಯೇ ಜೋಗುಳ ಅಂದು
ಹದಿನೆಂಟು ವರುಷದಿಂದದೇ ಹರುಷ
ನೀತಂದೆ ಇಂದೂ

ಆನಂದ ಆಕ್ರಂದ, ಉಲ್ಲಾಸ ಉದಾಸ
ಎಲ್ಲಕೂ ಆದೆ ನೀ ಎಂದೂ ಜೊತೆಗಾತಿ
ನಿನಗಿದೋ ಈ ಹಿರಿಯಕ್ಕನ
ಸಲುಗೆ ಪ್ರೀತಿ ಗೆಳತಿ

4 comments:

ಭಾಶೇ said...

ಹೇಯ್! ಮಾನಿ birthday ನಾ? ನನ್ನ ಶುಭಾಶಯಗಳನ್ನೂ ತಿಳಿಸು.
ಅವಳಿಗೆ ಹದಿನೆಂಟು ಅಷ್ಟೇ? ನಾವು ಯಾಕೇ ಮುಂದೆ ಬಂದುಬಿಟ್ವಿ?

ಕವನ ಚೆನ್ನಾಗಿದೆ. ಹೀಗೆ ಬರಿತಿರಮ್ಮ

sunaath said...

ಅಕ್ಕನ ಅಕ್ಕರತೆ ತುಂಬಿದ ಕವನವಿದು. ನಿಮ್ಮಂತಹ ಅಕ್ಕನನ್ನು ಪಡೆದ ನಿಮ್ಮ ತಂಗಿ ಭಾಗ್ಯಶಾಲಿ. ಅವಳಿಗೆ ನನ್ನ ಶುಭಾಶಯಗಳನ್ನೂ ಸಹ ತಿಳಿಸಿರಿ.

shivu.k said...

nanna kadeyindalu nimma tangige abhinandhane thilisi.

kanasu said...

@ sowm: thanks kane!

@ sunaath kaa kaa: tumba thanks kaka :)

@ shivu: thanks shivu. khandita tilistini