ನಿರೀಕ್ಷೆಗಳ ಸುಳಿಯಲ್ಲಿ ಮಿಂದು
ಈಜಿ ಹೊರ ಬರುವ ನಿರೀಕ್ಷೆಯಲ್ಲಿ
ಕಾರ್ಕೋಟ ವಿಷ ಸವಿದು ನುಂಗಿದರೂ
ಚೇತರಿಸಿ ಉಸಿರಾಡುವ ನಿರೀಕ್ಷೆಯಲ್ಲಿ
ಕತ್ತಲ ಹೊಗೆ ತುಂಬಿ ಕಪ್ಪಾದ ಕೋಣೆಯ
ಬೆಳಕ ಜ್ವಾಲಾಮುಖಿಯ ನಿರೀಕ್ಷೆಯಲ್ಲಿ
ಕೊಳೆತು ನಾರುವ ಫಲದ
ತಾಜಾ ರಸದ ನಿರೀಕ್ಷೆಯಲ್ಲಿ
ಮತ್ತದೇ ನಿರೀಕ್ಷೆಗಳ ಸುಳಿಯಲ್ಲಿ
ಅನಿರೀಕ್ಷಿತವಾಗೇ ಉಳಿಯುವ ಬದುಕು
2 comments:
ಕೊಳೆತು ನಾರುವ ಫಲದ
ತಾಜಾ ರಸದ ನಿರೀಕ್ಷೆಯಲ್ಲಿ ........
ನಿಜ... ನನಸಾಗ ಇಂತಹ ಕನಸುಗಳ ನೀರೀಕ್ಷೆಯನ್ನಷ್ಟೇ ಮಾಡಬಹುದು!
Post a Comment