ಉಟ್ಟ ಬಟ್ಟೆಯಲ್ಲೇ ಹೊರಟುಬಿಡಬೇಕು
ಕಾಡು ಕತ್ತಲು, ಬೆಟ್ಟ ತಪ್ಪಲು
ಸುತ್ತಿ ಸುತ್ತಿ ಅಲೆದಾಡಬೇಕು
ಹುಡುಕಬೇಕು, ನನಗೇನು ಬೇಕೆಂದು
ಎಲ್ಲವನ್ನೂ ಬಿಟ್ಟೋಡುವ
ಪಲಾಯನವಾದಿಯಾದರೆಷ್ಟು ಚೆನ್ನ
ಜೀವನವನೆದುರಿಸಿ, ಗೆಲುವು ಸಾಧಿಸಿದರೆ
ಮತ್ತಷ್ಟು ಚೆನ್ನ
ಆದರೆ, ಯಾವುದು ಸೋಲೋ
ಯಾವ ಗೆಲುವೋ?
ಸೋಲೇ ಗೆಲುವು?
ಆ ಅನುಭಾವಿ ಹಂತದಲ್ಲಿ
ಸೋಲುಗೆಲುವುಗಳೆರಡೂ ಒಂದೇ
ಸೋತರೂ, ಗೆದ್ದರೂ ನಿರ್ಣಾಯಕ ಸ್ಥಿತಿಯೊಂದೆ
ಮತ್ತೆ, ನನಗೇನು ಬೇಕು?
3 comments:
chennagide!
Sowm!
ಚನ್ನಾಗಿದೆ.
ಚನ್ನಾಗಿದೆ..
Post a Comment