Friday, February 11, 2011

ನಿನ್ನ ಭಾಷೆ ಕಲಿಸೋ ಗೆಳೆಯಾ...



"ಹೇಗಿದ್ದೀ?"
"ಚೆನ್ನಾಗಿರುವೆ"
"ಮತ್ತೇನು?"...
ಮತ್ತೇನೆಂದೆಯಾ ಗೆಳೆಯಾ!
ನೂರಾರಿವೆ ಮಾತು ಮನದಾಳದಲಿ
ವರುಷಗಳಿಂದ ಕನವರಿಸಿ ಹಡೆದದ್ದು
ಹುದುಗಿಸಿಟ್ಟದ್ದು, ನೆನೆದದ್ದು, ಮರೆತದ್ದು
ಸುಮ್ಮನೆ ಕಾಲು ಚಾಚಿದಾಗ ತೇಲಿ ಬಂದದ್ದು
ಅಯ್ಯೋ! ನಾನು ಹಿಂದೆ ಹೀಗಿದ್ದೆನೆ ಎಂದು ನಕ್ಕದ್ದು
ಮುಗ್ಧತೆಯ ಸುಖ ಉಂಡದ್ದು
ಹೀಗೆ ಇನ್ನಷ್ಟು, ಮತ್ತಷ್ಟು, ಸಾಕಷ್ಟು...
ಕೊನೆಗೆ ಬಾಯಿಗೆ ಬಂದದ್ದಿಷ್ಟು
"ಏನಿಲ್ಲ...ಊಟವಾಯಿತೇ?"
"ಹುಂ"
ಅಲ್ಲಿಗೆ ಮುಕ್ತಾಯ!
ತಂತ್ರಾಂಶದ ಅಂಶವಾದ ಬದುಕಿನ
ಬಿಡುವಿಲ್ಲದ ಕಾರ್ಯಮಗ್ನ ಜೀವನ ನಿನ್ನದು
ನೀನಂತೂ ನಗುತ್ತೀ, ಇವಳ್ಯಾಕೆ ಹೀಗೆ
ಒಂಥರಾ ವಿಚಿತ್ರ ಎಂದು...
ಹೇಗೋ ತಿಳಿಹೇಳಲಿ ನಿನಗೆ
ನನ್ನೆಲ್ಲ "ಮತ್ತೇನುಗಳನ್ನ"...
ಇದೇ ಯೋಚನೆಯಲ್ಲಿದ್ದಾಗ ಬಂದದ್ದು
ಮತ್ತೊಂದು ಸಂದೇಶ
"ಹಲೋ ಹೌ ಆರ್ ಯು"
ನೋಡಿ ನೆಮ್ಮದಿಯ ನಗೆ ನಕ್ಕೆ!..
ನಿನ್ನ ಮೌನ ಸಂಭಾಷಣೆ
ಮನಸಿನ ಭಾವನೆಗಳನ್ನು
ಅರಿಯಲು, ಅದಕನುವಾಗಲು
ನಿನ್ನ ಭಾಷೆ ಕಲಿಸೋ ಗೆಳೆಯಾ...
"ಫೈನ್" ಎಂದು ಮಾರುತ್ತರಿಸಿದೆ!

13 comments:

sunaath said...

ಕನಸು,
ಮನದಾಳದ ಮಾತುಗಳಿಗೆ ಸಮರ್ಪಕವಾದ ಅಭಿವ್ಯಕ್ತಿಯನ್ನು ನೀಡಿದ್ದೀರಿ. ಜೀವನ ಹೀಗೇ ಅಲ್ಲವೆ?

kanasu said...

thanks kaa kaa :)

ಭಾಶೇ said...

:) hmmm...

Dear... lets talk about it sometime! ;)

Venkatesha Murthy said...

"naguva nayana, madhura mouna..midiva hrudaya ire maateke !" antha helthaare ansutte nimma geleyaa :) keli nodi :)

umesh desai said...

good thought well expressed

ಚುಕ್ಕಿಚಿತ್ತಾರ said...

nice.. poetry

kanasu said...

thanks all! :)

kanasu said...

thanks all! :)

ಸಾಗರದಾಚೆಯ ಇಂಚರ said...

kanasu

chennagideri

ishta ayitu kavana

kanasu said...

Thanks Guru avare :)

Badarinath Palavalli said...

ಮಾತುಗಳೇ ಹಾಗೆ ಮೇಡಂ, ಅವು ಕೆಲವೊಮ್ಮೆ ಸಮಯಕ್ಕೆ ತಲುಪದ ಅಂಚೆಯಂತೆ! ತುಟಿಯಾಚೆಗೂ ಹೆಪ್ಪುಗಟ್ಟುವ ಮೌನದಂತೆ.

ನಿಮ್ಮ ಬರವಣಿಗೆಯಲ್ಲಿ ಮೃದುತ್ವವಿದೆ ಮತ್ತು ಅಕ್ಷರಗಳಾಚೆಗೂ ಸಾವಿರ ಅರ್ಥಗಳನ್ನು ಸ್ಪುರಿಸುವ ಕಲೆ ಇದೆ. ಭೇಷ್!

ನನ್ನ ಬ್ಲಾಗಿಗೂ ಬನ್ನಿ :
www.badari-poems.blogspot.com
www.badari-notes.blogspot.com
www.badaripoems.wordpress.com

Manu said...

liked it

Manu said...

liked it