Monday, September 1, 2008

ಕನಸೇ ರಮ್ಯ...

ದುಸ್ವಪ್ನದ ಬೆನ್ನಹತ್ತೇ ಬಂತು
ಒಂದು ಸುಂದರ ಸಿಹಿ ಕನಸು
ಹೆದರಿದ ಜೀವಕೆ ಸಾಂತ್ವನದಂತೆ
ತಂಪಾದ ಹಾಲಂತೆ ಆ ಹೊಂಗನಸು

ಹೆದರುತ್ತೇನೆ
ಆ ಮಧುರ ಕನಸು
ನನಸಾಗಿಬಿಟ್ಟರೆ!
ನೈಜಕ್ಕಿಂತ ಕನಸೇ ರಮ್ಯ

ನನಸಾಗಿ ಹೋದ ಕನಸು
ಮತ್ತೆಂದಿಗೂ ಕನಸಾಗದಲ್ಲವೇ!
ಅದಕ್ಕೇ, ನನ್ನ ಈ ಕನಸು ಕನಸಾಗೇ ಉಳಿಯಲಿ
ನನ್ನ ನಿತ್ಯಾನಂದದ ಉಸಿರಾಗಲಿ

4 comments:

dinesh said...

ನನಸಾಗಿ ಹೋದ ಕನಸು
ಮತ್ತೆಂದಿಗೂ ಕನಸಾಗದಲ್ಲವೇ!
ಅದಕ್ಕೇ, ನನ್ನ ಈ ಕನಸು ಕನಸಾಗೇ ಉಳಿಯಲಿ
.........ಸಾಲುಗಳು ತುಂಂಂಂಬಾ ಚೆನ್ನಾಗಿವೆ....

kanasu said...

Thank you dinesh.. :)

Madhava said...

Poem is good but......


The woods are lovely, dark, and deep,
But I have promises to keep,
And miles to go before I sleep,
And miles to go before I sleep.


you can't always be in dreams.

Anonymous said...

kanasinalli eradu vida olleya kanasu mathondu ketta kanasu olleya kanasu santhoshavannu koduthade, ketta kanasu hedarikeyannu untu maduthade.., adare kanasannu barada hage yarindalu thadeyalu sadyavilla, ade reethi jeevana kooda novu nalivugala saramale adaru olleya kanasugale barali ennuva ashaya... nannadu...