Friday, June 22, 2012

ಆ ಅಳಿಲು!




ನ್ಯೂಸ್ ಪೇಪರ್, ಟಿವಿ ಗೂಡು
ಎಕಾನ್ ಪಾಪ್ ಹಾಡು
ಪಕ್ಕದ ಸೀಟಿನ ಮೂಡು
ಇವೆಲ್ಲವನ್ನೂ ಗಮನಿಸುತ್ತಾ, ಪ್ರೀತಿ ಹುಡುಕುತ್ತಾ,
ಕಂಡ ಹಾಗೇ ಮೆಲ್ಲನೆ ಮೆಲ್ಲುತ್ತಾ, ಮನದಲ್ಲೇ ನಗುತ್ತಿದ್ದೆ

ಆಗಲೇ, ಬಾಗಿಲ ಬಳಿ ಇಣುಕಿತ್ತು ಅಳಿಲು ಮರಿಯೊಂದು
ಕಂಗಾಲಾದ ಪುಟ್ಟ ಮರಿಯು ತನ್ನಮ್ಮನ ಹುಡುಕಿತ್ತು
ಕಲ್ಲು, ಮರಳು, ಕಸ, ಗಿಡ, ಚಪ್ಪಲಿ
ನಡುವೆ ಪುಟ್ಟದೊಂದು ಜೀವ
ಸುತ್ತ ಹೊಸ ಪ್ರಪಂಚ, ಅಮ್ಮ ರಕ್ಷೆಗಿಲ್ಲ!

"ನನ್ನಮ್ಮ ಎಲ್ಲಿ ಹೋದಳು?
ನನ್ನ ಪುಟ್ಟ ತಮ್ಮ, ತಂಗಿ ಎಲ್ಲಿ
ಅಪ್ಪನಂತೆ ನಾನೂ ನಡೆಯಬಲ್ಲೆ ಎಂದು ಕುಣಿದೆ,
ಆದರೆ! ನಡೆದಾಟ ಕಲಿತದ್ದೇ ತಪ್ಪೇ!"
ಆ ಅಳಿಲ ಭೀತ ಕಂಗಳ ಪ್ರಶ್ನೆ!

ಮುದ್ದಾದ ಮರಿಯು ಭಯದಿಂದ
ಇತ್ತ ಅತ್ತ ತಿರುಗಾಡಿ
ಮತ್ತೊಮ್ಮೆ ನನ್ನ ನೋಡಿ,
ನಾ ನೋಡುತ್ತಿದ್ದ ಹಾಗೆ ಕಣ್ಮರೆಯಾಯಿತು!
ಎತ್ತ ಕಳೆದು ಹೋಯಿತೋ!

ಮರುಘಳಿಗೆಯೇ ಕಾದಿತ್ತು ಮತ್ತೊಂದು ಅಚ್ಚರಿ!
ಈಗ ತಾಯಿ ಅಳಿಲ ಸರದಿ!
ಇತ್ತಿಂದತ್ತ ಅತ್ತಿಂದಿತ್ತ ಓಡುತ್ತಾ ಹಾರುತ್ತಾ ಹುಡುಕಿತ್ತು
ತನ್ನ ಪುಟ್ಟ ಮರಿಯ ಕಾಣದೆ ಗಾಬರಿಗೊಂಡಿತ್ತು
ಅಲ್ಲಿ ಇಲ್ಲಿ, ಇಲ್ಲಿ ಅಲ್ಲಿ ಮತ್ತೆ ಮತ್ತೆ ಓಡಾಟ, ಹುಡುಕಾಟ!

"ನನ್ನ ಪುಟ್ಟ ಮರಿಯ ಕಂಡಿರಾ?
ಈಗತಾನೆ ಕಲಿತ ಜಿಗಿತ ಅದರ ಮೃತ್ಯುವಾಯಿತೆ!
ಬದುಕು ಘೋರ, ರಕ್ಷೆಗೆ ಕಲಿಯುವುದಿನ್ನೂ ಅಪಾರ
ಕೂಸದಿನ್ನೂ ಸಣ್ಣದು, ಬಾಳ ಬವಣೆ ಕಾಣದು!"
ತಾಯ ದುಗುಡ ಹೀಗಿದ್ದೀತೆ!

ಎಂಥ ಸಡವರ, ಎಂಥ ಚಡಪಡಿಕೆ
ದಿಗ್ಭ್ರಮೆಗೊಂಡೆ!
ಮನುಜರಾದರೇನು, ಪ್ರಾಣಿಯಾದರೇನು
ಉಸಿರಾಡುವ ಜೀವಕೆಲ್ಲ
ತಾಯಪ್ರೀತಿಯೊಂದೇ - ಚಿರಂತನ, ಅಪಾರ, ಅಮೋಘ!


9 comments:

Sushrutha Dodderi said...

nice. :-)

vidyadhar said...

chennagide ri..:)

kanasu said...

Thanks Sushrutha avare....neevu nanna blog ge bheti neediddakke khushi aitu :)

kanasu said...

Thank you Vidyadhar! :)

sunaath said...

ತುಂಬ ಚೆನ್ನಾಗಿದೆ.

Swarna said...

ಇಷ್ಟ ಆಯ್ತು.
ನಿಜ ತಾಯಿ ಪ್ರೀತಿಯೊಂದೆ,
ಸ್ವರ್ಣಾ

Badarinath Palavalli said...

ತಾಯಿ ಒಲುಮೆಯೇ ಹಾಗೆ ಅದು ನಿರಂತರ ಅನುರಾಗಮಯಿ.
ಅಂತೆಯೇ ಮಗುವೂ ಹಾಗೆ ಅದು ನಿರಂತರ ಮಾತೃ ಪ್ರೇಮಿ.

ಸುಷ್ಮಾ ಮೂಡುಬಿದಿರೆ said...

ತಾಯಿ ಪ್ರೀತಿ, ಕಂದ ಕಾಣದೆ ಇದ್ದಾಗ ತಾಯಿಯ ಸಂಕಟ...ಮನ ಮುಟ್ಟುವ ಸಾಲುಗಳು...ಚೆನ್ನಾಗಿದೆ ಮೇಡಂ..

suragi \ ushakattemane said...

ತಾಯ ಮಮತೆ ಎಂಬುದು ಎಲ್ಲಾ ಜೀವಿಗಳಲ್ಲಿರುವ ಸಾಮಾನ್ಯ ಗುಣ..ಕವನ ಚೆನ್ನಾಗಿದೆ.