ನೀನು ಕರೆದಾಗ ಓ ಎನಬೇಕು
ನಿನ್ನ ಮಾತಿಗೆ ನಾ ನಗಬೇಕು
ನಿನ್ನ ನೋಟದ ಬಾಣಕೆ ಕರಗಿ
ನಾ ನೀರಾಗಬೇಕು!
ಕಾದ ನೊರೆವಾಲ ಕಾಫಿ ಕಪ್ಪು
ನಿನ್ನ ಕೈಗಿತ್ತು ನಗೆ ಬೀರಿ
ದಿನದ ದಣಿವೆಲ್ಲಾ ಮಣಿವಂತೆ
ತಣಿವಂತೆ ಮಾತಾಡಬೇಕು!
ತುಟಿ ಬಿರಿಯುವಷ್ಟು ಮಾತು ನಗು ಹರಟೆ
ನನ್ನ ಬಾಳ ಪಯಣದ ಆಸೆ ಕನಸುಗಳ
ನಿನ್ನಾಳದ ಕಂಗಳ ನಡುವೆ ತೆರವುಗೊಳಿಸಬೇಕು
ನಿನ್ನ ಸ್ಫೂರ್ತಿಯಿಂದಲೇ ಅವೆಲ್ಲ ಸಾಕಾರಗೊಳ್ಳಬೇಕು!
ನಿನ್ನಾಕಾಂಕ್ಷೆ ಅರಿತು ಅದಕನುವಾಗಬೇಕು
ನಿನ್ನಿಚ್ಛೆ ನಿರೀಕ್ಷೆಗಳೆಲ್ಲ ನಿಜವಾಗಬೇಕು
ನಾವಿಬ್ಬರೂ ಸೇರಿ ಬಾಳರ್ಥವರಿಯಬೇಕು
ಮತ್ತೆ, ಹೀಗೆಲ್ಲ ನಿಜಕ್ಕೂ ನಡೆಯಬೇಕು!
3 comments:
ನೀನು ಇದೆಲ್ಲ ಮಾಡಲ್ಲ ಬಿಡು! :)
All the best!
again, sakkattagi bardiddeera..
Post a Comment