ಯಾಕೆ ಏನೇನೋ ಅನಿಸುತ್ತದೆ!
ಸರಿ ತಪ್ಪು ಏನೂ ತಿಳಿಯದು ಈ ಅನಿಸಿಕೆಗೆ
ಮನಸಿಗೆ ಈ ಹುಚ್ಚು ಆಲೋಚನೆಗಳನ್ನ
ತುಂಬಿದವರಾರು?
ನೀ ನನ್ನ ಹಾಗೆ
ನಾ ನಿನ್ನ ಹಾಗೆ
ನಾವಿಬ್ಬರೂ ನಾವಲ್ಲದ ಹಾಗೆ
ಆಗಸದಿ ಹಾರುವ ಚಿಟ್ಟೆಯಾದ ಹಾಗೆ
ನನ್ನ ಭಾವನೆಗೆ ನೀ ಉಸಿರಾದ ಹಾಗೆ
ನಿನ್ನ ಕಲ್ಪನೆಗೆ ನಾ ಮೂರ್ತವಾದ ಹಾಗೆ
ನಮ್ಮ ಕನಸಿನ ಹಣತೆ ಹಚ್ಚಿದ ಹಾಗೆ
ಕಲ್ಮಷವಿಲ್ಲದ ಪ್ರೇಮ ಜ್ಯೋತಿ ಬೆಳಗಿದ ಹಾಗೆ
ಹೌದು! ಇದು ಸ್ವಮುಗ್ಧ ಪ್ರಪಂಚ
ತಿಳಿದು ತಿಳಿದೂ ಕಟ್ಟಿದ ಕಲ್ಪನಾಲೋಕ
ಇದಕ್ಕೆ ಎಲ್ಲರೂ ಅರಸರು
ಮತ್ತಿದು ಪ್ರತಿ ವ್ಯಕ್ತಿಯ ವಯಕ್ತಿಕ ಆಸ್ತಿ