Tuesday, October 7, 2008

ದೂರದಲಿ ಬೆಳಕು ಕಾಣುತ್ತಿದೆ!

ಅಂದು, ಆ ಕ್ಷಣ
ನಾನೂ ತೇನ್ಸಿಂಗ್ ಆಗ ಬಯಸಿದ್ದೆ
ಅವನಂತೆ ಎತ್ತರಕ್ಕೇರಲೋ
ಏರುವವನ ಜೊತೆಗೂಡಲೋ

ತಿಳಿಯುವ ಹೊತ್ತಿಗೆ
ಆ ಆಸೆಯೇ ಇಂಗಿ ಹೋಗಿತ್ತು
ಕಳೆದ ಕನಸಿಗೆ ಮನಸು ಭಾರವಾಗಿತ್ತು
ಮತ್ತೆ ನೆನೆದು ಕಣ್ತುಂಬಿ ಬಂದಿತ್ತು

ಈಗೆಲ್ಲ ತಟಸ್ಥ
ದಾರಿ ತಪ್ಪದೆ ಮರಳಿ ಬಂದ ಮನಸು
ನಿರಾತಂಕ, ನಿರ್ಭಾರವೆನಿಸಿದೆ
ಯಾರೋ ಮೆಚ್ಚಿದ್ದ ಕಣ್ಣ ಹೊಳಪು ಮತ್ತೆ ಮರುಕಳಿಸಿದೆ

ಮುಂದಿನ ದಾರಿ ಸಾಕಷ್ಟಿದೆ
ದೂರದಲಿ ಬೆಳಕು ಕಾಣುತ್ತಿದೆ
ಮುಗುಳ್ನಗುತ ಹೆಜ್ಜೆ ಇಟ್ಟಿದ್ದೇನೆ
ನಿರಾಯಾಸದ, ಆನಂದದ ಪಯಣದತ್ತ

9 comments:

Anonymous said...

ಕವನ ಚೆನ್ನಾಗಿದೆ.....

ದಿಗಂತ್-

sunaath said...

ನಿಜ, ಕನಸುಗಾತಿ.
ತೇನಸಿಂಗ ಆಗಬೇಕಿಲ್ಲ.
ನಿರಾಳ ಮನಸ್ಸು ಇದ್ದಾಗ, ನಿಂತ ನೆಲವೇ ಗೌರಿಶಂಕರ!

Unknown said...

While reading this Poem, I was just thinking about the meaning! When I read it again after sometime, what came to my mind is...

The First Paragraph talks about Positive frame of Mind of a Human Being, then second one switches to Negativity and the third one compensates with Neutral form while the last, makes you to act practically because, the previous state of your mind was neutral!

So Isn't it indirectly say that...
Have a balanced Emotion and act accordingly? Just a thought flashed into me...

Well, Nice work... Keep Writing!:-)

kanasu said...

hey Rags..thanks..
tat was a good analysis... :)

ತೇಜಸ್ವಿನಿ ಹೆಗಡೆ said...

ಕನಸು,

ಗೌರಿಶಂಕರ ಪರ್ವತವನ್ನೇರುವುದಾದರೂ ಸಾಧ್ಯವೇನೋ ಆದರೆ ನಮ್ಮ ಮನಸ್ಸನ್ನು ನಾವು ಏರಿ ಅದನ್ನು ನಮ್ಮೊಳಗಿಟ್ಟು ಕೊಳ್ಳುವುದೇ ಬಲು ಕಷ್ಟ. ಒಳ್ಳೆಯ ಆಶಯವಿದೆ ನಿಮ್ಮ ಕವನದಲ್ಲಿ. "ತಮಸೋಮಾ ಜ್ಯೋತಿರ್ಗಮಯ"ವಾಗಲಿ ಎಲ್ಲರ ಬದುಕು.

girish said...
This comment has been removed by the author.
Anonymous said...

hey adbutavaagi brdidiya

idna ninge helakkadru ninge siktini hudgi

somu

shivu.k said...

ಕನಸು,
ಹೆಸರೇನೋ ಕನಸು ಅದರೆ ಕನಸು ಕಂಡ ಮರುಕ್ಷಣವೇ ವಾಸ್ತವಕ್ಕೆ ಬರುವುದಿದೆಯಲ್ಲ ! Great !

ಕವನ ವಾಸ್ತವಕ್ಕೆ ಹತ್ತಿರವಾಗಿದೆ.

ನಾನೊಬ್ಬ ಛಾಯಾಗ್ರಾಹಕ. ನೀವು ನನ್ನ ಬ್ಲಾಗ್ ಗಳಿಗೆ ಒಮ್ಮೆ ಬಂದರೆ ಅಲ್ಲಿ ನಿಮಗಿಷ್ಟವಾಗುವ ಲೇಖನ ಮತ್ತು ಬರಹ ಸಿಕ್ಕಬಹುದು.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಮತ್ತೊಂದು ಬ್ಲಾಗ್ ವಿಳಾಸ:
http://camerahindhe.blogspot.com/

girish said...

kansu avare...
padya tumba chenngide..

nija naanu kuda Galileo aag bek ankondidde...
aadre aagok aagilla... :(

evaga billgates aag beku anta iddini... :)

girish